ಶನಿವಾರ, ಏಪ್ರಿಲ್ 25, 2015

ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ನನ್ನ ಕವನ







































































































































































ಪೂರ್ವಗ್ರಹ ಪೀಡಿತ 



ಆತ ಕೇಳಿದ:-
ಪೂರ್ವಗ್ರಹ ಪೀಡಿತ ಅಂದರೇನು?
ನಾನಂದೆ:-
ಅಂಗವಿಕಲರ ಸ್ಕೂಟರನ್ನು
ಸರ್ವಾಂಗ ಸರಿ ಇರುವವ
ಚಲಾಯಿಸಿದರೂ
ಜನ ಯಾವ ಅಂಗ
ಊನವಾಗಿದೆ ಅಂತ ಹದ್ದಿನ
ಕಣ್ಣಿಟ್ಟು ದಿಟ್ಟಿಸುತ್ತಾರಲ್ಲ ಅದೇ.



ಎ.ಜೆ ಪರಪ್ಪು

ಮಹಿಳಾ ದಿನಾಚರಣೆ


ಮಹಿಳಾ ದಿನಾಚರಣೆಗೆ ಕವಿತೆ 
ಬರೆಯಲು ಹೊರಟಾಗ
ಸ್ತ್ರೀಗೆ ಸಮಾನಾರ್ಥಕ ಪದಗಳಿಗಾಗಿ 
ತಡಕಾಡಿ ಒಲಿಯದೆ ಹೋದಾಗ
ಅವಳ ಬಳಿ ಕೇಳಿದೆ
" ದೌರ್ಜನ್ಯಕ್ಕೊಳಗಾಗುವವರು"
ಅಂದ ಅವಳು ಅಡುಗೆ ಮನೆ ಸೇರಿ
ತನ್ನ ಕೆಲಸದಲ್ಲಿ ತಾನು ನಿರತಳಾದಳು
ನನಗರಿವಿಲ್ಲದೆ ಗಲ್ಲದ ಮೇಲಿಂದ
ಹನಿಯೊಂದು ಬಿದ್ದು ಆತ್ಮಹತ್ಯೆಗೆ
ಶರಣಾಯಿತು!


                                   ಎ.ಜೆ ಪರಪ್ಪು



ಹೋಳಿ


ಗ್ಯಾರೇಜು ಕೆಲಸಕ್ಕಿದ್ದ ಚಿಕ್ಕ ಹುಡುಗ
ವರ್ಕ್ ಶಾಪ್ ಮುಂದೆ ಇರುವ
ಶ್ರೀಮಂತರ ಮಕ್ಕಳೆಲ್ಲರೂ
ತರಹೇವಾರಿ ಬಣ್ಣಗಳ ಮೆತ್ತಿಕೊಂಡು
ಹೋಳಿ ಆಚರಣೆಯಲ್ಲಿ ಸಂಭ್ರಮದಿಂದ 
ತೊಡಗಿದ್ದರು ಅದನ್ನೇ ನೋಡುತ್ತಿದ್ದ ರಾಜು
ಕಣ್ಣಲ್ಲಿ ಉತ್ಸಾಹ ಮಿಂಚು ಮೂಡಿತ್ತು
ಇವರುಗಳಿಗೆ ಜುಜುಬಿ ವರುಷಕ್ಕೊಮ್ಮೆ
ಮಾತ್ರ ಬಣ್ಣದ ಹಬ್ಬ.
ಆದರೆ ನನಗೆ ಪ್ರತೀದಿನವೂ...!
ಲೋಕಭಿರಾಮವಾಗಿ ಮನದೊಂದಿಗೆ
ಮಾತಿನಲ್ಲಿರುವಾಗಲೇ ಯಜಮಾನನ
ಕೂಗಿದ ಸದ್ದಿಗೆ ವಾಸ್ತವಕ್ಕಿಳಿದ.
ಆಗ ಅವನ ಕೈಯಲ್ಲಿದ್ದ ಗ್ರೀಸ್ ಮೈಮೇಲೆ
ಚೆಲ್ಲಿಕೊಂಡು ಅರಿವೆ ಬಣ್ಣ ಹೋಳಿಯಾಯಿತು.




                                                                                                         ಎ.ಜೆ ಪರಪ್ಪು

ಅಲ್ಪಸಂಖ್ಯಾತರು ನಾವು ಅಲ್ಪಬುದ್ದಿಯವರಲ್ಲ 


ನನ್ನ ಭವ್ಯ ಭಾರತದ
ಮನೆ ಮನೆಗಲ್ಲಿ ಭಗವಾದ್ವಜ
ಕಟ್ಟ ಬೇಕೆನ್ನುವ ಸುದ್ದಿ ಬಂದಾಗಲೆಲ್ಲ
ನೆರೆಯ ಪಾಪಿಸ್ಥಾನದ
ಹಸಿರು ದ್ವಜದ ದುರ್ಗತಿ ಕಣ್ಣ 
ಮುಂದೆ ಹಾದು ಹೋಗುತ್ತದೆ
ಮಸೀದಿ ಇಗರ್ಜಿ ಉಸ್ತಾದ್
ಭಗಿನಿಯರ ಮೇಲೆ
ದಾಳಿ ನಡೆಸಿ ಹಲ್ಲೆಗೊಂಡ
ವಾರ್ತೆ ಕೇಳಿದಾಗಲೆಲ್ಲ
ದೇಶವನ್ನು ಕಟುಕರ ಕೈಗೆ ಕೊಟ್ಟು
ನಮ್ಮ ಸಾವಿನ ಖೆಡ್ಡವನ್ನು ತಾವೇ
ತೋಡಿಕೊಂಡ ವಿಷಾಧ ಆವರಿಸುತ್ತೆ
ಘರ್ ವಾಪಸಿ ಯತ್ನ
ಮೀಸಲಾತಿ ಕಡಿವಾಣಕ್ಕೆ ಪ್ರಯತ್ನ
ಆಹಾರ ಪದ್ದತಿಯ ನಿಯಂತ್ರಣ
ಇದು ಕೋಮುವಾದದ ನೇರ ಆಮಂತ್ರಣ!
ವಿವಿಧತೆಯಲ್ಲಿ ಏಕತೆಯ ದೇಶವನ್ನು
ಒಡೆದು ಕಪಟ ಪ್ರೇಮದ ಕೋಮು ಧ್ವೇಷದ
ದೇಶ ಕಟ್ಟಲು ಇದು ಸಕಾಲ
ಕೋಮು ವಿಷ ಬೀಜ ಬಿತ್ತಲು
ಇದು ಪರ್ವಕಾಲ!
ಅಲ್ಪ ಸಂಖ್ಯಾತರನ್ನು ಅವಮಾನಿಸಿ
ಹಿಯಾಳಿಸಿ ಅನುಮಾನಿಸಿ
ಅವರ ಹಕ್ಕುಗಳ ಕಸಿದು ಬಸಿದು
ಅವರ ಗೋರಿಯ ಮೇಲೆ ದೇಶ ಕಟ್ಟಲು ಹೊರಟವರೇ..
ಮದ್ಯ ಕುಡಿದ ಚೇಳು
ತನ್ನ ತಾನು ಕುಟುಕಿ ಸಾಯುವ ಸ್ಥಿತಿ
ಧರ್ಮದ ಅಮಲೇರಿದ ನಿಮಗೂ ಬರಲಿದೆ ಕಾದು ನೋಡಿ..

ಎ.ಜೆ ಪರಪ್ಪು
ಜಾತಿ ಗಣತಿ ಫಲ ಸೊನ್ನೆಯಾಗದಿರಲಿ


ಸಾಮಾಜಿಕ ನ್ಯಾಯಕ್ಕೆ ಹೆಸರಾದ ಕರ್ನಾಟಕದಲ್ಲಿ ಸರ್ವ ಸಮುದಾಯದ
ಏಳಿಗೆಗಾಗಿ ಮಾನ್ಯ ಮುಖ್ಯಮಂತ್ರಿವರು ಹಲವಾರು ಯೋಜನೆಗಳನ್ನು ರೊಪಿಸಿ ಅದನ್ನು 
ಜಾರಿಗೆ ತಂದು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾದರು ...
ಜಾತಿರಹಿತ ಸಮಾಜ ನಿರ್ಮಾಣವಾಗಬೇಕು ಎಂದು ದೇಶದ ಸರ್ವೋಚ್ಚ ನ್ಯಾಯಾಲಯವು 
ಪ್ರತಿಪಾದಿಸಿದ್ದರೊ,ಅದು ನಮ್ಮ ದೇಶದಲ್ಲಿ ಅಸಾಧ್ಯವಾದ ಮಾತು..
ಅಂದಮೇಲೆ "ಅಟ್ಟಿಸದ ಕಡೆ ಹೋಗದಿದ್ದರೆ ಹೋದ ಕಡೆ ಅಟ್ಟಿಸು" ನಮ್ಮೊರ ಗಾದೆ ಮಾತಿನಂತೆ 
ಜಾತಿಯಲ್ಲಿ ಪ್ರಬಲರ ಪಡೆಯವ ಅದೇ ಪ್ರಾತಿನಿಧ್ಯವನ್ನು ಸಮಾಜದಲ್ಲಿ ಅತ್ಯಂತ ತುಳಿತಕ್ಕೊಳಗಾದ 
ನೊಂದ ಹಾಗೊ ಸೊಕ್ತ ಸ್ಥಾನ ಮಾನವಿಲ್ಲದೆ ಸಮಾಜದಲ್ಲಿ ಹಿಂದುಳಿದವರಾಗೆ ಬದುಕುವ ಕೆಳಜಾತಿ, 
ಉಪಜಾತಿವರ ಆರ್ಥಿಕ ಹಾಗೊ ಶ್ಯೆಕ್ಸಣಿಕ ಸ್ಥಿತಿಯನ್ನು ಸುಧಾರಣೆ ಮಾಡಿದಾಗ ಅಲ್ಲಿ ಜಾತಿಗಳ ನಡೆವೆ 
ಕಂದರ ಕಡಿಮೆಯಾಗಿ ಜಾತಿ ವ್ಯವಸ್ಥೆ ಇಲ್ಲದಾಗುವ ಪ್ರಸಂಗ ಬರಬಹುದು..ಅದ್ದರಿಂದ ಜಾತಿ ಸಮೀಕ್ಷೆ
ಕಾಲದ ಅವಶ್ಯ ಕೊಡ ...ಆ ನಿಟ್ಟಿನಲ್ಲಿ ಮಾನ್ಯ ಸಿದ್ದರಾಮ್ಯಯ ಸರಕಾರ 175 ಕೋಟಿ ಖರ್ಚ ಮಾಡಿ 
ತರುವ ಜಾತಿ ಗಣತಿ ಫಲ ಸೊನ್ನೆಯಾಗದಿರಲಿ

ಜಬ್ಬಾರ್ ಪರಪ್ಪು,










































































#ಪೇಸ್ಬುಕ್#ವಾಟ್ಸಪ್


ಪೇಸ್ಬುಕ್ ನಿಜದಲ್ಲಿ ಪೇಸ್ಬುಕ್ ಅಲ್ಲ
ವಾಟ್ಸಪ್ ನಿಜದಲ್ಲಿ ವಾಟ್ಸಪ್ ಅಲ್ಲ
ಇವೆರಡೂ ಸಮಯ ಹಾಗೊ ನಮ್ಮನು
ಕೊಲ್ಲವು ರಾಕ್ಷಸ ಎರಡು ಮುಖಗಳು !