ಬುಧವಾರ, ಫೆಬ್ರವರಿ 17, 2016

 ನಬಿ ಜನ್ಮ ದಿನಾಚರಣೆ
~~~~~~~~~~~

ಜಬ್ಬಾರ್ ಪರಪ್ಪು,ಇರಾ

ನಬಿ ಜನ್ಮ ದಿನಾಚರಣೆ ಅಚರಿಸಬೇಕೋ
ಬೇಡವೂ ತರ್ಕವನ್ನು ಸಲ್ಪ ಪಕ್ಕಗಿಡಿ..!!
ನನಗೊಂದಿಷ್ಟು ಕೆಲಸವಿದೆ
ತುರ್ತಾಗಿ ನೆಬಿ ಕೀರ್ತನೆ ಬರೆಯಬೇಕಿದೆ;
ಆಧುನಿಕತೆಯ ಸುಳಿಯಲ್ಲಿ ಸಿಕ್ಕಿ
ನಾಸ್ತಿಕನಾಗಿಯೋ ನೂತನಾವಾದಿಯಾಗಿಯೋ
ಅಂಕೆ ಬದಲಿಸುವ
ಅವಕಾಶಗಳು ಹೇರಳವಿರುವ
ಸಮುದಾಯಲ್ಲಿ ನನ್ನ ಮಕ್ಕಳಿಗೆ
ಕಂಠಪಾಠ ಮಾಡಿಸಿ
ಹಾಡಿಸಿಬೇಕಿದೆ:
ಅದಾದಾಗಲಿದೆ ಅವರನ್ನು
ಮಾನವನ್ನಾಗಿಸಲು ನಾ ಮಾಡುವ
ಉದಾತ್ತ ಕಾರ್ಯ..!!

ನಬಿ ಜನ್ಮದಿನಾಚರಣೆ ಅಚರಿಸಬೇಕೋ
ಬೇಡವೋ ತರ್ಕವನ್ನು ಸಲ್ಪ ಪಕ್ಕಗಿಡಿ..!!
ಹಬ್ಬದ ದಿನದಂದು ಕಣ್ಣೀರಿಟ್ಟ
ಹುಡುಗನ ತಲೆ ನೇವರಿಸಿ
ಅವನಿಗೆ ಹೊಸ ಬಟ್ಟೆ ಕೊಡಿಸಿ
ಅವನಾಸೆಯಂತೆ
ಹೆಗಲ ಮೇಲೆ ಕೂರಿಸಿ ನಡೆದ
ಅನಾಥರ ಪ್ರವಾದಿಯನ್ನು ಅಚ್ಚುಕಟ್ಟಾಗಿ
ಹಿಂಬಾಲಿಸುವ ಗುರುವರ್ಯರುಗಳ ಕಣ್ಣಲ್ಲಿ
ನೆಬಿ ಅಸ್ಮಿತೆ ಕಾಣಬೇಕಿದೆ!!
ನನಗೀಗ ಶೀಘ್ರ
ಯತೀಂಖಾನಾಕ್ಕೆ ತೆರಳಬೇಕಿದೆ..!!

ನೆಬಿ ಜನ್ಮದಿನಾಚರಣೆ ಅಚರಿಸಬೇಕೋ
ಬೇಡವೂ ತರ್ಕವನ್ನು ಸಲ್ಪ ಪಕ್ಕಗಿಡಿ..!!
ಇನಿಮ್ಮ ತರ್ಕದಿಂದ ಬುದ್ದ ಬಸವಣ್ಣನರ
ತತ್ವಕ್ಕಿಂತ ಪ್ರವಾದಿ ವಚನ ಜಗತ್ತಿನ
ಉದ್ದಗಲಕ್ಕೂ ಪ್ರಚಾರಗೊಂಡು
ಮಾನವೀಯತೆ ಮೇಲ್ಮೈಸಿದ ಜನರ
ಗುಂಪೊಂದನ್ನು
ಕಳೆದುಕೊಂಡ ವಿಷಾದವಿದೆ!
ತುರ್ತಾಗಿ ಪ್ರವಾದಿ ಸಂದೇಶ
ಜಗದಗಲ ಸಾರಿ ಮಾನವನಲ್ಲಿ
ಮಾನವೀಯತೆ ಜಾಗೃತಗೊಳಿಸಿಬೇಕಿದೆ!!

ನೆಬಿ ಜನ್ಮದಿನಾಚರಣೆ
ಬೇಕೋ ಬೇಡವೂ ?
ಗದ್ದಲವನ್ನು ಸ್ವಲ್ಪ ನಿಲ್ಲಿಸಿ!
ಅಲ್ಲೆಲ್ಲೋ ಪ್ರೇಮಿಗಳು
ಮನದಾಳದಿಂದ ಮನಮುಟ್ಟುವಂತೆ
ಬುರ್ದಾ ಆಲಾಪಿಸುತ್ತಿದ್ದಾರೆ;
ನನಗೊಂದಿಷ್ಟು ಏಕಾಂತ ನೀಡಿ
ಆ ಇಶಲ್ ಗೆ ಸಲ್ಪ ಕಿವಿಯಾಗಿ
ಆಶಿಕಿಗಳಾ ಸಾಲಿಗೆ ಸೇರಬೇಕಿದೆ..!!

ನೆಬಿ ಜನ್ಮದಿನಾಚರಣೆ ಅಚರಿಸಬೇಕೋ ಬೇಡವೋ? 

ತರ್ಕವನ್ನು ಮುಂದುವರಿಸೋಣ...
ನೆಬಿ ಮದ್ಹ್ ಮಾಡಿ, ಮೌಲೂದ್ ಸ್ವಲಾತ್ ಓದಿ ಪ್ರಾರ್ಥಿಸಿದ

 ತಬ್ರುರುಕ್ ಬಾಯಿಗೇರಿಸಿಕೊಂಡು ಶುರುಹಚ್ಚಿಕೊಳ್ಳೋಣ
ಹಾಗದರೂ ನಿಮ್ಮ ರಕ್ತದಲ್ಲಿ ಆ ಸೀರಣಿ ಆಕ್ಸಿಜನಗಾಗಿ 

ಪರಿವರ್ತನೆಗೊಂಡು ಸಾಸಿವೆಯೆಷ್ಟದರೂ
 ಪ್ರವಾದಿ ಪ್ರೇಮ ಹೃದಯಕ್ಕೆ ಹರಿದು
ಎಲ್ಲರ ಹೃದಯ ಪ್ರವಾದಿ ಪ್ರೇಮದತ್ತ ತೆರೆಯಲಿ;
ಜಗತ್ತೇ ಪ್ರವಾದಿ
ದಿನಾಚರಣೆ ಕೊಂಡಾಡಲಿ!!!


http://medianine.in/news-details.php?id=703&tbl=topnews#sthash.oHAUTHtE.dpbs

ಕೃಷ್ಣ ಮೂರ್ತಿ ಸರ್ ಜೊತೆ

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ನನ್ನ ಹನಿಗವನ


ಅಪ್ಪ ಅಂದ್ರೆ ಅಕಾಶ ಮಣಿಕಾಂತ್ ಸರ್ ಜೊತೆ

ಕವಿತೆಗೆ ಸಿಕ್ಕ ಬಹುಮಾನ


ಬಹುಮಾನ

ಕವಿತೆಗೆ  ಸಿಕ್ಕ ಬಹುಮಾನ

ಸಾಹಿತ್ಯ ಗೆಳೆಯರೊಂದಿಗೆ

ಗಣೇಶಣ್ಣ ಜೊತೆ
ಯಂಶ ,ಹುಸೇನಿ ಜೊತೆ

ಚೊಚ್ಚಲ ಕವಿಗೋಷ್ಠಿಯಲ್ಲಿ

ಕಿರು ಕಾಣಿಕೆ ಚೇತನ ತೀರ್ಥಹಳ್ಳಿವರಿಂದ
ಚೊಚ್ಚಲ ಕವಿಗೋಷ್ಠಿಯಲ್ಲಿ

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ನನ್ನ ಸಣ್ಣ ಕಥೆ


ಸಾಹಿತ್ಯ ಗೆಳೆಯರೊಂದಿಗೆ



ಸಾಹಿತ್ಯ ಗೆಳೆಯರೊಂದಿಗೆ