ಹೋಳಿ
ವರ್ಕ್ ಶಾಪ್ ಮುಂದೆ ಇರುವ
ಶ್ರೀಮಂತರ ಮಕ್ಕಳೆಲ್ಲರೂ
ತರಹೇವಾರಿ ಬಣ್ಣಗಳ ಮೆತ್ತಿಕೊಂಡು
ಹೋಳಿ ಆಚರಣೆಯಲ್ಲಿ ಸಂಭ್ರಮದಿಂದ
ತೊಡಗಿದ್ದರು ಅದನ್ನೇ ನೋಡುತ್ತಿದ್ದ ರಾಜು
ಕಣ್ಣಲ್ಲಿ ಉತ್ಸಾಹ ಮಿಂಚು ಮೂಡಿತ್ತು
ಇವರುಗಳಿಗೆ ಜುಜುಬಿ ವರುಷಕ್ಕೊಮ್ಮೆ
ಮಾತ್ರ ಬಣ್ಣದ ಹಬ್ಬ.
ಆದರೆ ನನಗೆ ಪ್ರತೀದಿನವೂ...!
ಲೋಕಭಿರಾಮವಾಗಿ ಮನದೊಂದಿಗೆ
ಮಾತಿನಲ್ಲಿರುವಾಗಲೇ ಯಜಮಾನನ
ಕೂಗಿದ ಸದ್ದಿಗೆ ವಾಸ್ತವಕ್ಕಿಳಿದ.
ಆಗ ಅವನ ಕೈಯಲ್ಲಿದ್ದ ಗ್ರೀಸ್ ಮೈಮೇಲೆ
ಚೆಲ್ಲಿಕೊಂಡು ಅರಿವೆ ಬಣ್ಣ ಹೋಳಿಯಾಯಿತು.
ಎ.ಜೆ ಪರಪ್ಪು

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ