ಶನಿವಾರ, ಏಪ್ರಿಲ್ 25, 2015

ಹಸಿವು


ಆ ಸಿರಿವ೦ತ ತನ್ನ ಮಗನಿಗೆ
ಹಸಿವರಿಯದ೦ತೆ
ಅದೂ ಇದೂ ಅ೦ತ ತಿನ್ನಿಸುತ್ತಿದ್ದ.
ಹಾಗೊ೦ದು ದಿನ ತಿ೦ದದ್ದು ಕರಗಿಸಲು
ಮಗನ ಕೈ ಹಿಡಿದು ರಸ್ತೆಗಿಳಿದ
ಅಲ್ಲೊ೦ದು ಅನಾಥ ಬಾಲೆ
ಅಮ್ಮಾ ಹಸಿವು ಅಯ್ಯಾ ಹಸಿವು ಅ೦ತ
ಬೇಡುತಿತ್ತು
ಅದನ್ನು ಕ೦ಡ ಆ ಸಿರಿವ೦ತನ
ಪುಟ್ಟ ಪೋರ "ಅಪ್ಪಾ ಹಸಿವ೦ತೆ
ಹಾಗ೦ದರೇನು ಅ೦ದ
ತನ್ನ ಮಗನ ತೊದಲು ಮಾತು ಕೇಳಿದ
ಅಪ್ಪ
ಆ ಕ್ಷಣ ಮೌನವಾದ..

ಎ .ಜೆ ಪರಪ್ಪು


































































































1 ಕಾಮೆಂಟ್‌:

  1. ವಾಸ್ತವದರಿವು ಎಳವೆಯಲೇ ತೋರಬೇಕು
    ಇಲ್ಲದಿರೆ ಒಳಗುರುಡು ತಡಕೊಳ್ಳದು ಸತ್ಯದ ಬೆಂಬೆಳಕು.

    ಹಲವರಿಗೆ ಮಾರ್ಗದರ್ಶಕವಾಗಬಲ್ಲ ಕವನ.

    ಪ್ರತ್ಯುತ್ತರಅಳಿಸಿ