ಶನಿವಾರ, ಏಪ್ರಿಲ್ 25, 2015

ಆ ಮಾಯಾ ನಗರಿಯ ಬಿರು ಬೇಸಿಗೆ
ಮಟ ಮಟ ಮಧ್ಯಾನ
ನೆತ್ತಿಯ ಮೇಲೆ ಸೂರ್ಯ
ಕುಲುಮೆಯಲಿ ಕಾದ
ಸಲಾಕೆಯ೦ತೆ ಬಿಸಿಯಾದ 
ಟಾರು ರಸ್ತೆ!
ಬರಿಗಾಲಿಟ್ಟರೆ ಸಾಕು
ಬೊಬ್ಬೆ ಎದ್ದು ಬಿಡುತ್ತದೆ
ಉಳ್ಳವರು ದುಬಾರಿ
ಬೆಲೆಯ ಶೂ ಧರಿಸಿ
ನಡೆಯುತ್ತಾರೆ
ಅಲ್ಲೊಬ್ಬಳು ಅಬ್ಬೇಪಾರಿ
ಬೊಜ್ಜು ಬಾಯಿಯ ಅಜ್ಜಿ
ಅದೇ ರೋಡಿನಲ್ಲಿ
ಬರಿಗಾಲಲ್ಲಿ ನಡೆಯುತ್ತಿದ್ದಾಳೆ
ಒಮ್ಮೆ ತುದಿಗಾಲ್ಲಿ
ಮತ್ತೊಮ್ಮೆ ಕಡೆ ಕಾಲಲ್ಲಿ...
ಇದನ್ನು ನೋಡಿಯೂ
ನೋಡದ ಹಾಗೆ ಹೋಗುವ
ಜನರನ್ನು ನೋಡಿ
ಮರುಕಪಟ್ಟ ಕಾಗೆಯ
ರೋಧನೆ
"ಓ ರಸ್ತೆಯೇ ಆ ಅಜ್ಜಿ ನಡೆದಷ್ಟು
ದೂರ ನಿನ್ನ ಮೈ ತಣ್ಣಗಾಗಿಸಿ ಕೊಡು"

ಎ .ಜೆ ಪರಪ್ಪು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ