ತಿಮ್ಮ ಯಾವುದೂ ಒಂದು ಖಾಸಗಿ ವಾಹಿನಿಯಲ್ಲಿ
ಕಾಲು ಹಿಡಿದು ಕೆಲಸಕ್ಕೆ ಸೇರಿದ. ಅಲ್ಲಿಂದ ಶುರುವಾಯಿತು ಅವನ ಗ್ರಹಚಾರ. ಅವನಿಗೆ ಆ
ವಾಹಿನಿಯ ಬಾಸ್ ಹೇಳಿದರು ಹೋಗಿ ಸಿದ್ದರಾಮಯ್ಯನನ್ನು ಸಂದರ್ಶನ ಮಾಡಿ ಅಂತ, ಅಯ್ಯೋ!
ಹೇಗಪ್ಪಾ ಈ ಸಿದ್ದು ಅಣ್ಣನ ಬೇಟಿ ಮಾಡಲಿ ಅಂತ ತಲೆಗೆ ಕೈಯಿಟ್ಟು ವಿಧಾನಸೌಧಕ್ಕೆ ಹೆಜ್ಜೆ
ಹಾಕಿದ. ಅಲ್ಲಿ ವಾಚ್‍ಮೆನ್ ಅವನ ಹೆಜ್ಜೆಗೆ ತಡೆ ಹಾಕಿದ. ಅದಕ್ಕೆ ತಿಮ್ಮ ನನಗೆ
ಸಿಯಮ್‍ನ್ನ ಕಾಣಬೇಕು ಅಂದ, ಅದಕ್ಕೆ ಅವನು ಆಗಲ್ಲಾರೀ… ಅದಕ್ಕೆ ತಿಮ್ಮ ಏನ್ರೀ ನಾವು ಮತ
ಹಾಕಿ ಕಳುಹಿಸಿದ ಜನಪ್ರತಿನಿಧಿಯನ್ನು ನೋಡಬೇಕಾದರೆ ಯಾರದ್ದಾದರೂ ಪ್ರಬಾವ ಬಳಸಿ,
ಅಪಾಯಿಮೆಂಟ್ ತೆಗೆದು ಕಾಲು ನೋಯಿಸಬೇಕಾ, ನಮ್ಮ ನೆರೆಯ ಕೇರಳದ ಸೊಲಾರ್ ಮುಖ್ಯಮಂತ್ರಿ
ಕೈಗೆಟಕುವ ಮುಖ್ಯಮಂತ್ರಿ ಇವರೇನ್ರೀ.. ತಾವು ಚುನಾವಣೆಗೆ ಮುಂಚೆ ನಾನು ನಿಮ್ಮಲ್ಲೊಬ್ಬ
ಸಾಮಾನ್ಯ ಅಂತ ಬಡಾಯಿಕೊಚ್ಚುತ್ತಿದ್ದವರು.. ಅಂದ ಮೇಲೆ ಕೊನೆಗೆ ಅವನ ಐಡಿ ತೋರಿಸಿದ ಮೇಲೆ
ಒಳಗೆ ಬಿಟ್ರು..- ತಿಮ್ಮ:- ಸರ್ ನಮಸ್ತೆ ನಾನು ತಿಮ್ಮ 24/7 ಖಿ8 ನಿಂದ ನಿಮ್ಮ ಸಂದರ್ಶನ ಮಾಡಲು ಬಂದಿದ್ದೇನೆ ಸರ್.
ಸಿದ್ದು:- ನಮಸ್ತೆ ರೀ.. ಸಂದರ್ಶನ
ಮಾಡಿ, ಮಾಡಿ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದೆನೆ. ರಾಜಕೀಯ ನಿವೃತ್ತಿ ಘೋಷಿಸಬೇಕು ಅಂತ
ಅನಿಸುತ್ತೆ, ಏನ್ರೀ..ನಿಮ್ಮ ಗೋಳು ಹೇಳಿ..??
- ತಿಮ್ಮ:- ಸರ್, ನಿಮ್ಮ ನಡೆ-ನುಡಿ ಕಾಣುವಾಗ ನೀವು ನಿಜವಾಗಲೂ ರಾಜಕೀಯ ನಿವೃತ್ತಿ ಘೋಷಿಸುವ ಕಾಲ ದೂರವಿಲ್ಲ ಸರ್.. ಕೆಟ್ಟಕಾಲ ಬಂದರೇ ಪಟ್ಟದ ರಾಜ ಬೀದಿಗಿಳಿಯುತ್ತಾನೆ ಅಂತಾರಲ್ಲ.. ಇಲ್ಲಿ ಒಳ್ಳೆಯವರಿಗೆ ಕಾಲ ಚೆನ್ನಾಗಿಲ್ಲ ಸರ್.. ನೀವು ಮೊನ್ನೆ ನಾನು ಪರಿಪೂರ್ಣ ಪ್ರಾಮಾಣಿಕನಲ್ಲ ಅಂತ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದೀರ.. ನನಗೆ ಗಾಂಧೀಜಿ ಹೇಳಿದ ಮಾತು ನೆನಪಿಗೆ ಬರುತ್ತಿದೆ ಸರ್.. “ಸತ್ಯವನ್ನು ಹೇಳುವವನು ಭ್ರಷ್ಟನಾಗಲು ಸಾದ್ಯವಿಲ್ಲ..” ನಿಮ್ಮದು ಶುದ್ದ ಹಸ್ತ ಸರ್..ಮತ್ತೆ ಇನ್ನೊಂದು ಕೇಳಬೇಕು ನಿಮ್ಮ ಕಾಲೆಳೆಯಲು ಜಾತಕ ಪಕ್ಷಿಯಂತೆ ಕಾಯುತ್ತಿರುವ ಸುರೇಶನ ಅಣ್ಣ ಹಾಗೂ ಡಾಕ್ಟರ್ ತುದಿಕಾಲಲ್ಲಿ ನಿಂತಿದ್ದಾರೆ, ಅದಲ್ಲದೇ ಅವರ ಅಮ್ಮ ನನ್ನ ಮಗ ಖಂಡಿತವಾಗಿ ಸಿಯಮ್ಮ್ ಆಗೇ ಆಗುತ್ತಾನೆ ಅಂದಿದ್ದಾರೆ ಅಲ್ವಾ ಸರ್ ಯಾವ ರಾಜ್ಯದ ಸಿಯಮ್ಮ್ ಆಗುತ್ತಾರೆ ಅಂತೆ..??
ಸಿದ್ದು:- ಶಿಂಧೆ ಹೇಳಿದ್ದಾರಲ್ಲ ರಾಮ ಶಾಮ ಭಾಮ..ಯಾರೇ ಪ್ರಧಾನಿಯಾಗಬಹುದು ಮುಖ್ಯಮಂತ್ರಿ ಆಕಾಂಕ್ಷಿ ಆಗಬಹುದು..ಅದರ ಬಗ್ಗೆ ಕೇಳಬೇಡಿ..
- ತಿಮ್ಮ:- ಸರ್ ಹಲವಾರು ಸಾಧಕ-ಬಾಧಕ ನಡುವೆ ಅನ್ನಬಾಗ್ಯ- ಕ್ಷೀರಬಾಗ್ಯ ಯೋಜನೆ ಯಶಸ್ಸಿನಲ್ಲಿ ಸರ್ಕಾರ ತೇಲಾಡುತ್ತಿದೆ..ಆದರೇ ನನಗೆ ಅನಿಸುತ್ತೆ ಇಷ್ಟೆಲ್ಲಾ ಜನಪರ ಕಾಳಜಿ ವಹಿಸಿದ ನೀವು ಯುವ ಸಮುದಾಯವನ್ನು ಕಡೆಗಣಿಸಿದ್ದೀರ ಅಂತ ಅನಿಸುತ್ತೆ ಸರ್.. 50% ವಿದ್ಯಾರ್ಥಿಗಳ ನಾಲ್ಕು-ಐದು ಪದವಿ ಪಡೆದು ಕೆಲಸ ಇಲ್ಲದೆ ಮನೆಯಲ್ಲಿ ಕುಳಿತವರ ಬಗ್ಗೆ ನಿಮ್ಮ ಅಭಿಪ್ರಾಯವೇನು ಸರ್ ಅವರಿಗೆ ಯೋಜನೆ-ಗೀಜನೆ ಅಂತ ಯಾವುದು ಇಲ್ಲವಾ..?
ಸಿದ್ದು:- ಈಗ ದೊಡ್ಡದಾಗಿ “ಜಿಮ್”
ವ್ಯಾಯಾಮ ಅಂತ ಕೈಗಾರಿಕೆಯಿಲ್ಲ ಹೊಡಿಕೆ ಪರವಾನಿಗೆ ಕೊಟ್ಟು ಕೆಲಸ ಕೊಡಿಸುವ ಹಾಗೆ
ಇಲ್ಲ.. ನನ್ನ ಈ ಮಟ್ಟಕ್ಕೆ ಬೆಳೆಸಿದ ರೈತವರ್ಗ ಜನಸಾಮನ್ಯನ ವರ್ಗವನ್ನು ಎದುರು
ಹಾಕಿಕೊಳ್ಳುವ ಹಾಗೇ ಇಲ್ಲ.. ಅದಕ್ಕೆ ರಾಷ್ಟೀಯ ಮಹಾತ್ಮ ಪ್ರೇಮಯೋಜನೆ ಅಂತ
ಮಾಡಿದ್ದಾರೆ..
- ತಿಮ್ಮ:- ಮಹಾತ್ಮ ಪ್ರೇಮಯೋಜನೆ ಬಗ್ಗೆ ಸ್ವಲ್ಪ ವಿವರಿಸ್ತೀರ?
ಸಿದ್ದು:- ಇದು ಏನಿಲ್ಲ ಅವರನ್ನು
ಸ್ವಾವಲಂಭಿ ಉದ್ಯೋಗವನ್ನು ಮಾಡುವ ಉದ್ದೇಶದಿಂದ ಅವರಿಗೆ ಲವ್ ಮಾಡಲು ಒಂದು ಹುಡಗಿಯನ್ನು
ನೀಡುವುದು ಆಮೇಲೆ ಪ್ರೀತಿ ಜೋರಾದರೆ ಅವರ ಪ್ರೀತಿಯನ್ನು ಬ್ರೆಕ್ ಮಾಡುವುದು. ಅದೆ
ಪ್ರೀತಿಯಲ್ಲಿ ಆ ಹುಡುಗರು ಭಗ್ನ ಪ್ರೇಮಿಯಾಗಿ ಕವನ-ಗಿವನ ಗೀಚತೊಡಗುತ್ತಾರೆ.
ಪ್ರೀತಿ-ಪ್ರೇಮ-ಪ್ರಣಯ ಅಂತ ಕಥೆ-ಕಾದಂಬರಿ ಬರೆಯಲು ಶುರು ಮಾಡುತ್ತಾರೆ. ಅಲ್ಲಿ ಒಬ್ಬ
ಕವಿ, ಪಸ್ರವ ಆಗಿತ್ತೆ. ಅವನ ಕವನ ಸಂಕಲನ ಪುಸ್ತಕ ಮಾಡಿ ಆ ಹಣದಿಂದ ಜೀವನ ಸಾಗಿಸಬಹುದು.
ಇವರನ್ನೇ ನಾವು ಬುದ್ದಿ ಜೀವಿಗಳು ಅಂತ ಕರೆಯುತ್ತೇವೆ. ಹೇಗಿದೆ ನಮ್ಮ ಯೋಜನೆ.
- ತಿಮ್ಮ:- ಸೂಪರ್ ಸರ್ ಮತ್ತೇ ಮೂನ್ನೆ ಚೀನಕ್ಕೆ ಹೋದಿರಲ್ಲ ಸರ್ ನೀವು ಸೂಟು-ಬೂಟ್ ದರಿಸಿ ಪಾಶ್ಯತ್ಯ ಸಂಸ್ಕ್ರತಿಯನ್ನು ಒಗ್ಗಿಕೂಂಡಿದ್ದು ಸರಿ ಕಾಣಿಸಿಲ್ಲಾ ಸರ್.
ಸಿದ್ದು.:- ನಾನು ಸಂಸ್ಕ್ರತಿ-ಕಲರ್
ಅಂತ, ಪಂಚೆ ಉಟ್ಟು ಹೋಗಿದ್ದರೆ, ಮರುದಿವಸ ಪೇಪರ್‍ನವರು ನಮ್ಮ ಸಿಯಮ್ ಪಂಚೆ ನಮ್ಮ
ಸಂಸ್ಕ್ರತಿ ಅದನ್ನು ಎತ್ತಿ ತೊರಿಸಿದರು ಅಂತ ಬರೆದಾರು, ಆಮೇಲೆ ಜನ ತಪ್ಪು
ತಿಳ್ಕೋತ್ತಾರೆ. ಈ ಮಾದ್ಯಮದವರೆ ಹೀಗೆ ನಿದ್ದೆ ಮಾಡಲು ಬಿಡಲ್ಲ.
- ತಿಮ್ಮ:- ನಮ್ಮ ಭಾವಿ ಪ್ರದಾನಿ ಎಂದೇ ಬಿಂಬಿತವಾಗಿರುವ ನಮೋ ಬಗ್ಗೆ ನಿಮ್ಮ ಅಭಿಪ್ರಾಯ ಅವರೂ ಮುಸ್ಲಿಮರ ಬೆಂಬಲ ಸಿಗಬಹುದು ಸರ್.
ಸಿದ್ದು:- ಈ ವಿಷಯದಲ್ಲಿ ನನ್ನಿಂದ
ಮನಮೋಹನ್ ಸಿಂಗ್ ಹಾಗೆ ಬಾಯಿ ಮುಚ್ಚಿ ಇರಲು ಆಗಲ್ಲ ಅವರು ಯಾವ ತಿಪ್ಪರಲಾಗ ಹಾಕಿದರು
“ಇಟ್ಟಿ ತುಳ್ಳಿಯಾಲ್ ಚಟ್ಟಿಯಂಡೆ ಉಳ್ಳ್‍ಲ್” (ಸಿಗಡಿ ಮೀನು ಎಷ್ಟು ಜಿಗಿದರು ಪಾತ್ರೆಯ
ಒಳಗೆ) ಅಂತ ವiಳಿಯಾಳಿಯಲ್ಲಿ ಗಾದೆ ಮಾತು ಇದೆಯಲ್ಲ, ಅವರನ್ನು ಎಷ್ಟು ವಿಜೃಂಬಿಸಲು
ನೋಡಿದರೂ ಅಷ್ಟು ವಿಷ್ನಗಳು ಅವರನ್ನು ಆವರಿಸುತ್ತದೆ, ಅವರು ಮುಸ್ಲಿಮರನ್ನ ಓಲೈಕೆ
ಮಾಡುದಕ್ಕೆ ಇನ್ನು ಬರುವ ಎಲ್ಲಾ ಸಮಾವೇಶ, ರ್ಯಾಲಿಗೆ ಸುಮಾರು ಟೊಪ್ಪಿ-ಬುರ್ಖಾ
ಖರೀದಿಸಿದರಂತೆ, ಟೊಪ್ಪಿ-ಬುರ್ಖಾ ಅಂಗಡಿಯವರಿಗೆ ವ್ಯಾಪರದಲ್ಲಿ ಸುಗ್ಗಿಯಂತೆ..
ತಿಮ್ಮ:- ಯಾಕೆ ಸರ್ ಟೊಪ್ಪಿ-ಬುರ್ಖಾ ಅಂಗಡಿಯವರಿಗೆ ವ್ಯಾಪರದಲ್ಲಿ ಸುಗ್ಗಿ..??
ಸಿದ್ದು:- ಮೋದಿ ಗಿಮಿಕ್ ಮಾಡಲು ಹೊರಟಿದ್ದಾರೆ.. ಅದು ಏನು ಗೊತ್ತ ಅಲ್ಲಿಗೆ
ಬರುವ ಬಿಜೆಪಿ ಕಾರ್ಯಕರ್ತ ಪುರುಷರಿಗೆ ಟೋಪಿ, ಸ್ತೀಯರಿಗೆ ಬುರ್ಖಾ ನೀಡಿ ಜನಸಾಮನ್ಯರ
ಕಣ್ಣಿಗೆ ಮಣ್ಣು ಎರಚಿ ನಾನು ಹಲವಾರು ಮುಸ್ಲಿಮರ ಗೋರಿ ಮೇಲೆ ನನ್ನ ಸಾಮ್ರಾಜ್ಯವನ್ನು
ಕಟ್ಟಿರಬಹುದು, ನಕಲಿ ಎನ್‍ಕೌಂಟರ್ ಮಾಡಿ ಸುಟ್ಟಿರಬಹುದು ಆದರೂ ನನ್ನ ಪ್ರೀತಿಸುವ
ಅಲ್ಪ ಸಂಖ್ಯಾತರೂ ಇಷ್ಟು ಮಂದಿ ಇದ್ದಾರೆ ಅಂತಾ ಹೇಳಲು ಹೊರಟಿದ್ದಾನೆ.
- ತಿಮ್ಮ:- ದನ್ಯವಾದ ಸರ್ ನಿಮ್ಮ ಅಮೂಲ್ಯವಾದ ಸಮಯವನ್ನು ನಮ್ಮ ಜೊತೆಗೆ, ವ್ಯಯಿಸಿದಕ್ಕೆ..
ಇದನ್ನು ವಿ ಕೆ ನ್ಯೂಸ್ ನಲ್ಲಿ ಓದಬೇಕಾದರೆ ಇಲ್ಲಿ ಕ್ಲಿಕ್ ಮಾಡಿ http://www.vknews.in/2013/09/18/nagebaraha-by-jabbar-parappu/
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ