ಶುಕ್ರವಾರ, ಮಾರ್ಚ್ 14, 2014

ವಿಷಾದ ಗೀತೆ

ಬಾ ಒಲವೇ 
ನಾ ವಿಷಾದ ಗೀತೆ 
ನೆಚ್ಚಿಕೊಳ್ಳವ 
ಮೊದಲೇ 
ಬಂದು ನನ್ನ 
ಸೇರಿಬಿಡು
ನಾನು ಅಂದುಕೊಂಡಿದೆ 
ಅವಳೆಂದರೆ ನನ್ನ ಬಾಳ 
ಬೆಳಗಿಸುವ ದೀಪ
ಆದರೆ ಅವಳು ಉಳಿದೆ 
ಬಿಟ್ಟಳು ದೂರ ಎಂದು 
ತಲುಪದ ದ್ವೀಪ 

#ಲ(ಕ್ಷ್ಯ)ಕ್ಷ



ಅವನಿಗೆ ಒಂದೇ ಒಂದು ಲಕ್ಷ್ಯ 
ಸಂಪಾದಿಸಬೇಕು ತಾನು ಲಕ್ಷ ಲಕ್ಷ


ಸೋಪು 
ತಾನು ಕರಗಿ
ಇತರರ ಮೈ ತ್ವಚೆಯನ್ನು
ಕೋಮಲವಾಗಿಸಿತು

ಗುರುವಾರ, ಜನವರಿ 23, 2014

ವರದಕ್ಷಿಣೆ ಮೋಹಿ ಸಮಾಜ ದ್ರೋಹಿ

ಅದು ಯಾವನಯ್ಯಾ ಜಾರಿಗೆ ತಂದ
ವರದಕ್ಷಿಣೆಯೆಂಬ ನೂತನ ಹೆಸರಿನ ಬಿಕ್ಷಾಟನೆ
 
ನನ್ನದೇ ತರಗತಿಯಲ್ಲಿ ಓದಿದ ಅವಳಿಗೆ ಇವತ್ತು
ಮದುವೆ ಅಂತ ನಾನು ಮೂಲೆಯಲಿ ಕೂತು
ಕಣ್ಣಿರು ಹಾಕುತ್ತಿದುದನು ನೋಡಿ ಅಪ್ಪ ಹೊರಟರು
ನನಗೆ ಗಂಡು ಹುಡುಕಲು… 
ಗಂಡು ಸಿಕ್ಕಿದ, ಕುಂಟನು-ಕುರುಡನು
ನಾ ಕೇಳಲಿಲ್ಲ..ಒಂದು ವಯಸ್ಸು ಅದು
ದಾಟಿದರೆ ಬರುವುದು ಎರಡನೆ ಸಂಬಂಧ
ಅಂತ ಯಾವುದೋ ಪುಣ್ಯಾತ್ಮ ಹೇಳಿದ್ದಾನೆ…
ಅದಕ್ಕೆ ಕಣ್ಣು ಮುಚ್ಚಿ ಸಮ್ಮತಿಸಿದೆ
ಪಾಲಿಗೆ ಬಂದದ್ದು ಪಂಚಾಮ್ರತವೆಂದು…
ಅದರೆ ಅವನು ಕೇಳಿದ ವರದಕ್ಷಿಣೆಯೆಂಬ ಭಿಕ್ಷೆ
ಪಾಪ ಅಪ್ಪ ಸಾಲ-ಶೊಲ ಮಾಡಿ ಕೊಟ್ಟ ಹಣದಿಂದ
ಮನೆಗೆ ಬಳಿದಿರುವ ಪೈಂಟ್ ನನ್ನ ಅಪ್ಪನ ಬೆವರಿನ
ವಾಸನೆ ಮೂಗಿಗೆ ಬಡಿಯತಿದೆ
ಮೌಲಾಂಜಿ ರಾತ್ರಿ ಕೈಗೆ ಇಟ್ಟ ಆ ಗೋರಂಟಿ ಬಣ್ಣ
ಅಪ್ಪ ಸಾಲ ತಿರಿಸಲಾಗಾದೆ ಜೈಲು ಸೇರಿ ಅವರು
ಕೊಟ್ಟ ಬೆತ್ತದ ಪೆಟ್ಟಿನಿಂದ ಬೆನ್ನಲ್ಲಿ ಮೊಡಿದ
ಬಾಸುಂಡೆ ಬಣ್ಣದಂತೆ ಕಾಣುತಿದೆ… 
ನಾನು ಸಂಕಟ ಪಡಬಾರದೆಂದು ಒಡಲಲ್ಲಿ
ನೋವಿನ ಸಾಗರವನ್ನು ಇಟ್ಟು ನಗು ಮುಖದಲ್ಲಿ ಇದ್ದಿಯಲ್ಲ ..
ಹೇಳು ಇದು ಯಾವ ಕಲಾಕ್ಷೇತ್ರದಲ್ಲಿ ಕಲಿಸಿಕೊಟ್ಟರಪ್ಪ..?? 
ನಾನು ಬಡವಳಾಗಿ ಹುಟ್ಟಿದ್ದು ತಪ್ಪಾ…??
ಅದೂ ಹೆಣ್ಣಾಗಿ ಹುಟ್ಟಿದು ತಪ್ಪಾ..??
ಹೇಳಿ ಮೀಸೆ ಹೊತ್ತು ತಿರುಗುವ ಗಂಡು ಜಾತಿಗಳೇ 
 
ಯಾರದ್ರೂ ಪುಣ್ಯಾತ್ಮರು ಸಹಾಯ
ಮಾಡಿಯಾರು ಅಂತ ಹೊರಟೆ…
ನೀ ಮಸೀದಿಯೆಂಬ ಅಲ್ಲಾಹನ ಭವನಕ್ಕೆ
ಅವರು ಕೊಟ್ಟರು “ಲೆಟರ್ ಪ್ಯಾಡ್ “ಎಂಬ ಭಿಕ್ಷಾ ತಟ್ಟೆ…
ನನ್ನದೊಂದು ದೊಡ್ಡ ಧಿಕ್ಕಾರವಿರಲಿ,
ನೆತ್ತಿಯಲ್ಲಿ ಕಪ್ಪು ಬುಗುಟಿ ಹೊತ್ತು
ಸ್ವಯಂಘೋಷಿತ ಸಮಾಜ ಉದ್ಧಾರಕರಿಗೆ 
ತನ್ನ ಜೀವ ತೆತ್ತಾದರೂ ಮಗಳು ಚೆನ್ನಾಗಿ
ಬಾಳು ಕಂಡ್ರೆ ಸಾಕು ಅನ್ನುವ ನಿನ್ನ ಮನಸು,
ತಾನು ಕರಗಿದರೂ, ಜಗಕ್ಕೆಲ್ಲಾ ಬೆಳಕು ಕೊಡುವ ಮೇಣದಂತೆ…
ಅಪ್ಪ ನೀನು ಎಂಥ ತ್ಯಾಗಮಯಿ….
 
ಅಬ್ದುಲ್ ಜಬ್ಬಾರ್ ಪರಪ್ಪು ಇರಾ.

ಶುಕ್ರವಾರ, ನವೆಂಬರ್ 29, 2013

ಎಲ್ಲಿ ಹೋಗಿದ್ದೆ ..????

ನನ್ನ ಮೇಲೆ ಬಿದ್ದ ಮಳೆ ಹನಿ 
ಇಲ್ಲಿ ತನಕ ಎಲ್ಲಿ ಹೋಗಿದ್ದೆ 
ನನಗೆ ಇಂದು ಒಲಿದ ಕವನದ 
ಸಾಲು ಇಲ್ಲಿ ತನಕ ಎಲ್ಲಿ ಮೆರೆಯಾಗಿದ್ದೆ 
ನನ್ನ ತಲೆ ದೊಗುವಂತೆ ಮಾಡಿದ
ಅ ನಾದಸ್ವರ ಇಲ್ಲಿ ತನಕ ಎಲ್ಲಿ ಅಡಗಿದ್ದೆ
ಮೋಡದ ಗರ್ಭ ಹೊಕ್ಕರೆ ಮಳೆ 
ಸಿಗಬಹುದೆನು 
ನನ್ನ ಹೃದಯ ಬಗೆದು ನೋಡಿದರೆ 
ನಿನ್ನ ಪ್ರೀತಿನೆ ತುಂಬಿದ ರಕ್ತ 
ಮಾಂಸ ಖಂಡ ಸಿಗಬಹುದ...
ಕತ್ತಲು ಬಗೆದು ನೋಡಿದ್ರೆ
ಬೆಳಕು ಸಿಗಬಹುದು
ನನ್ನ ಹೃದಯ ಸಿಗಿದು
ನೋಡಿದರೆ ನಿನ್ನ ಪ್ರೀತಿನೆ ತುಂಬಿದ ರಕ್ತ ತುಂಬಿದ
ಮಾಂಸ ಖಂಡ ಸಿಗಬಹುದ..
.
.
.
.

ಮೂಲ:ತಮಿಳ್
ಅನುವಾದ : ಜಬ್ಬಾರ್ ಪರಪ್ಪು

ಸಾವೆಂಬ ಮಾಯವೇ


ಸಾವು ದಿನಾ ಕಾಡುತಿದೆ 
ಬೆಂಬಿಡದ ಬೇತಾಳದಂತೆ 
ಜೀವನವನ್ನು ತಕ್ಕಡಿಯಲ್ಲಿ
ತೂಗಿ-ಅಳೆದು ನೋಡಿದರೆ 
ಸಾವು ಸನ್ನಿಹಿತಲ್ಲಿದಂತೆ

ನಿನ್ನೆ ಒಂದು ಸಪ್ನ ಕಂಡೆ 
ನಾನು ಅಸುನೀಗಿದ್ದೆ ಕಪನ
ಧರಿಸಿ ದಫನ ಮಾಡಲು
ತಯಾರಾದ ಮೃತ ದೇಹದಂತೆ

ಆರಡಿ ಮಣ್ಣು ಸೇರಲು ಕೆಲವು
ನಿಮಿಷ ಬಾಕಿ ಉಳಿದಂತೆ
ಕ್ರಿಮಿ-ಕೀಟ ವಿಷ ಜಂತುಗಳು
ಪೈಪೋಟಿ ಬಿದ್ದವರಂತೆ
ಬಾಯಲ್ಲಿ ಜೊಲ್ಲು ಸುರಿಸಿ
ಹೊಂಚು ಹಾಕುವ ನರಿಗಳಂತೆ

ಇಡಿ ಜಗತ್ತನೆ ಗೆದ್ದು ತನ್ನ
ಕಿರು ಬೆರಳಲ್ಲಿ ಆಡಿಸುತ್ತೇನೆ
ಎಂಬ “ಅಹಂ”ಅಲೆಕ್ಸಾಂಡರನಂತೆ

ಇಂದು ಅದೇ ಕಿರು ಬೆರಳು
ಅಲುಗಾಡಿಸಲು ಆಗದಷ್ಟು
ಜಂಘ ಬಲವೇ ಉಡುಗಿಹೋಗಿ
ಸ್ಥಬ್ದವಾಗಿ ಮಲಗಿದ್ದೇನೆ ಬೊಂಬೆಯಂತೆ

ಸಾವೆಂಬ ಮಾಯೆಯೇ
ಏನಿದು ನಿನ್ನ ಆಟ..
ಸತ್ತ ಮೇಲೆ ಬುದ್ಧಿ ಬರುತ್ತೆ
ಅನ್ನುತ್ತಾರಲ್ಲ ಇದೇ ನಿನ್ನ ಪಾಠವೇ

ಅಬ್ದುಲ್ ಜಬ್ಬಾರ್ ಪರಪ್ಪು, ಇರಾ.


ಇದನ್ನು ವಿ ಕೆ ನ್ಯೂಸ್ ನಲ್ಲಿ ಓದಬೇಕಾದರೆ ಇಲ್ಲಿ ಕ್ಲಿಕ್ ಮಾಡಿ http://www.vknews.in/2013/11/06/saavemba-maayave/